ಸ್ವಯಂ ಉನ್ನತಿ : ನಿಮ್ಮ ಸಾಮರ್ಥ್ಯದ ಅನಾವರಣ

ನಮಸ್ಕಾರ,

ಸ್ವಯಂ ಉನ್ನತಿಗೆ ಹಾರ್ದಿಕ ಸ್ವಾಗತ.

ಈ ಪ್ರಪಂಚದಲ್ಲಿ ನಮ್ಮ ಜೀವನ ನಾವು ಸುಧಾರಿಸಿಕೊಳ್ಳಬೇಕೆ ಹೊರತು ಬೇರೆ ಯಾರೂ ಬರುವದಿಲ್ಲ.

ನಮ್ಮ ಬಗ್ಗೆ ನಾವೇ ಅವಲೋಕನ ಮಾಡಿಕೊಂಡಾಗ, ನಮ್ಮ ಸಾಮರ್ಥ್ಯದ ಒಳವಿಮರ್ಶೆ ಮಾಡಿಕೊಂಡಾಗ ನಮ್ಮೊಳಗಿನ ಶಕ್ತಿಯ ಅರಿವಾಗುತ್ತದೆ. ಅದನ್ನು ಬಳಸುವ ದಾರಿ ಕೂಡಾ ಗೋಚರವಾಗುತ್ತದೆ.

ನಮ್ಮೆಲ್ಲರಲ್ಲೂ ಇದುವರೆಗೂ ಬಳಸದ ಸಾಮರ್ಥ್ಯದ ಖಜಾನೆಯೇ ಇದೆ ಎಂಬುದು ನಮ್ಮ ದೃಡ ನಂಬಿಕೆ.

ಸ್ವಯಂ ಉನ್ನತಿ ಬ್ಲಾಗ್ ನ ಮುಖ್ಯ ಗುರಿ ನಿಮ್ಮನ್ನು ನೀವೆ ಅರಿಯುವ, ನಿಮ್ಮ ಮಹೋನ್ನತ ಬದಲಾವಣೆಯ ಸಾಹಸಕ್ಕೆ ಒಂದು ಸ್ಪೂರ್ತಿಯ ರೀತಿ ಕೆಲಸ ಮಾಡುವದು.

ಇದು ಕೇವಲ ಬ್ಲಾಗ್ ಅಲ್ಲ. ಜೀವನದಲ್ಲಿ ವಿಜಯವನ್ನು ತನ್ನದಾಗಿಸಿಕೊಳ್ಳಬೇಕೆಂಬ ಕನಸ್ಸನ್ನು ಹೊತ್ತ ಸಾಹಸಿಗಳಿಗೆ, ಬೆಳೆಯಬೇಕೆಂಬ ಆಸೆ ಇರುವವರಿಗೆ ಮಾರ್ಗ ತೋರಿಸುವ ಅರಿವು. ಸಮಸ್ಯೆಗಳ ವಿರುದ್ಧ ಹೋರಾಡಿ ಜಯಿಸುವ, ಕಲಿತ ಪಾಠಗಳ ಸಂಗ್ರಹ.

ನಿಮ್ಮ ಉನ್ನತಿಯ ಪಯಣ ಇಂದೇ ಪ್ರಾರಂಭ ಆಗಲಿ

ಇಲ್ಲಿನ ಪ್ರತಿ ಪುಟ ನಿಮ್ಮದೇ ಆದ ಉತ್ತಮ ಆವೃತ್ತಿಯ ಹೊರ ತೆರೆದಿಡುವ ಕೀಲಿ ಕೈ ಆಗಲಿ ಎಂದು ಬಯಸೋಣ.

ನಿಮ್ಮ ಉನ್ನತಿಯ ಪಯಣ ಸ್ವಯಂ ಉನ್ನತಿಯೊಂದಿಗೆ ಆರಂಭಿಸಿ.

ಮುಖ್ಯ ವಿಭಾಗಗಳು

ನಾವು ಬದುಕಿನಲ್ಲಿ ಮುಂದೆ ಬರಲು ಹಲವು ದಿಶೆಯಲ್ಲಿ ಪ್ರಯತ್ನ ಬೇಕು. ಅದಕ್ಕಾಗಿ ಸ್ವಯಂ ಉನ್ನತಿ ಲೇಖನಗಳು ಹಲವು ವಿಭಾಗಗಳಲ್ಲಿ ಇರಲಿವೆ. ಅವು ಓದುಗರ ಎಲ್ಲಾ ರೀತಿಯ ಅಭಿವೃದ್ಧಿಗೆ ಸ್ಪೂರ್ತಿ ನೀಡಲಿ ಎಂಬುದು ನಮ್ಮ ಆಶಯ.

 • ಗುರಿ ಮತ್ತು ಸಾಧನೆ
 • ಮನಸ್ಥಿತಿ ಮತ್ತು ಸಕಾರಾತ್ಮಕ ಚಿಂತನೆ
 • ತನ್ನ ಶೋಧನೆ ಮತ್ತು ಜಾಗೃತಿ
 • ಸಮಯ ಪರಿಪಾಲನೆ
 • ಉತ್ಪಾದಕತೆ
 • ಸ್ಪೂರ್ತಿ
 • ಹಣಕಾಸು
 • ಆರೋಗ್ಯ
 • ಉದ್ಯೋಗ
 • ಸಂವಹನ
 • ಕಲಿಕೆ
 • ವೈಯಕ್ತಿಕ ಬ್ರಾಂಡಿಂಗ್
 • ಸೋಶಿಯಲ್ ಮಾಧ್ಯಮ
 • ಹವ್ಯಾಸ ಮತ್ತು ಕ್ರಿಯಾಶೀಲತೆ
 • ಪುಸ್ತಕ ವಿಭಾಗ
 • ಬನ್ನಿ ನಮ್ಮ ಜೀವನದ ಪ್ರತಿ ಸಮಸ್ಯೆಯನ್ನು ಒಂದು ಅವಕಾಶವನ್ನಾಗಿ ಬದಲಾಯಿಸೋಣ. ಈ ಬ್ಲಾಗ್ ಕೆಲವೇ ಕೆಲವು ಓದುಗರಿಗೆ ಸ್ಪೂರ್ತಿ, ಹುರುಪು ಹಾಗೂ ಮಾರ್ಗದರ್ಶನ ನೀಡಿದರೂ  ಈ ಶ್ರಮ ಸಾರ್ಥಕ.

  ನೆನಪಿಡಿ ಸ್ವಯಂ ಉನ್ನತಿ ಬ್ಲಾಗ್ ಮಸ್ತಕಮಣಿ.ಕಾಂ ವೆಬ್ ತಾಣದ ಮಣಿಗಳಲ್ಲಿ ಒಂದಾಗಿದೆ. ಉಳಿದ ಮಣಿಗಳನ್ನು ನೋಡಲು ಮಸ್ತಕಮಣಿ.ಕಾಂ ತಪ್ಪದೇ ಭೇಟಿ ನೀಡಿ.

  ನಿಮ್ಮ ಸಲಹೆಗಳಿಗೆ ಯಾವಾಗಲೂ ಸ್ವಾಗತ.

  ಇಂತಿ ನಿಮ್ಮ

  --ಸ್ವಯಂ ಉನ್ನತಿ

  0

  ಕಾಮೆಂಟ್‌ಗಳಿಲ್ಲ

  ಕಾಮೆಂಟ್‌‌ ಪೋಸ್ಟ್‌ ಮಾಡಿ

  blogger

  ತಪ್ಪದೇ ಓದಿ...

  ವಿದೇಶ,ಬೆಂಗಳೂರು
  ©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
  ಇದು ಮಸ್ತಕಮಣಿ.ಕಾಂ ಕೊಡುಗೆ